ಕೆರ್ ಪರಿಣಾಮ (ವಿದ್ಯುದ್ಯುತಿ ವಿದ್ಯಮಾನ) ಎಂದರೆ ವಿದ್ಯುತ್‌ಕ್ಷೇತ್ರವನ್ನು ಪ್ರಯೋಗಿಸಿದಾಗ ವಸ್ತುವೊಂದರ ವಕ್ರೀಭವನಾಂಕ ಬದಲಾಗುವಿಕೆ (ಫೋಟೊಆಪ್ಟಿಕ್ ಫಿನಾಮಿನನ್). ಸ್ಕಾಟಿಷ್ ಭೌತವಿಜ್ಞಾನಿ ಜಾನ್ ಕೆರ್ (1824-1907) ಆವಿಷ್ಕರಿಸಿದ (1875) ವಿದ್ಯಮಾನ ಇದಾದ್ದರಿಂದ ಕೆರ್ ಪರಿಣಾಮ ಎಂದು ಹೆಸರು. ಚೋದಿಸಿದ ವಕ್ರೀಭವನಾಂಕದ ಬದಲಾವಣೆ ವಿದ್ಯುತ್ ಕ್ಷೇತ್ರದ ವರ್ಗಕ್ಕೆ ಅನುಲೋಮಾನುಪಾತದಲ್ಲಿರುತ್ತದೆ. ಎಲ್ಲ ವಸ್ತುಗಳು ಕೆರ್ ಪರಿಣಾಮವನ್ನು ತೋರಿಸುತ್ತವೆ, ಆದರೆ ಕೆಲವು ದ್ರವಗಳು ಇತರ ದ್ರವಗಳಿಗಿಂತ ಇದನ್ನು ಹೆಚ್ಚು ಪ್ರಬಲವಾಗಿ ತೋರಿಸುತ್ತವೆ. == ಉಪಯೋಗಗಳು == ಇದರಿಂದ ಬೆಳಕಿನ ಮಾಡ್ಯುಲನ (ನಿಶ್ಚಿತ ಆವೃತ್ತಿಗೆ ಅನುಗುಣವಾಗಿ ಬೆಳಕಿನ ಬದಲಾವಣೆ) ಸಾಧ್ಯ. ಮಾಹಿತಿ ಸಾಗಣೆಯಲ್ಲಿ ಇದರ ಉಪಯೋಗ ಉಂಟು. == ಉಲ್ಲೇಖಗಳು ==